ನಿಮ್ಮ ವಾಹನಕ್ಕೆ ಈ ಹೊಸ  ನಂಬರ್ ಪ್ಲೇಟ್ ಹಾಕಿಸ್ಕೊಳ್ಳಿ   ಇಲ್ಲದಿದ್ರೆ ಭಾರೀ ದಂಡ ಕಟ್ಟಿ!

Unsplash

ಎಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳು ಹೊಸ ನಂಬರ್‌ ಪ್ಲೇಟ್‌ ಅಂದರೆ ಹೈ-ಸೆಕ್ಯುರಿಟಿ ನಂಬರ್ ಪ್ಲೇಟ್‌ (HSRP) ಅನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ರಾಜ್ಯ ಸಾರಿಗೆ ಇಲಾಖೆ ತಿಳಿಸಿದ್ದು, ಗಡುವನ್ನು ಸಹ ನೀಡಿದೆ.

Unsplash

ಈ ಕುರಿತಾದ ಅಧಿಸೂಚನೆಯನ್ನು ಆಗಸ್ಟ್ 17, 2023 ರಂದು ಹೊರಡಿಸಲಾಗಿದೆ. ಇದಕ್ಕೆ ನವೆಂಬರ್ 17 ರ ಗಡುವನ್ನು ನೀಡಲಾಗಿದೆ. ವಿಫಲವಾದ ವಾಹನ ಮಾಲೀಕರ ವಿರುದ್ಧ ದಂಡದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

Maahithi.in

HSRP ನಂಬರ್‌ ಪ್ಲೇಟ್‌ಗಳಲ್ಲಿ ಲೇಸರ್ ತಂತ್ರಜ್ಷಾನದ ಅಳವಡಿಕೆ ಮಾಡಲಾಗುತ್ತದೆ. ಇದರಿಂದ ವಾಹನ ಕಳುವಾದಲ್ಲಿ ಪತ್ತೆಗೆ ಸಹಕಾರಿಯಾಗುತ್ತದೆ

ಟ್ಯಾಂಪರಿಂಗ್ ಮತ್ತು ಪ್ಲೇಟ್‌ಗಳನ್ನು ನಕಲಿ ಮಾಡುವುದನ್ನು ತಡೆಯುವ ಎಚ್‌ಎಸ್‌ಆರ್‌ಪಿ ತಡೆಯಲಿದೆ. ವಾಹನಗಳಿಂದ ಉಂಟಾಗುವ ಅಪರಾಧಗಳನ್ನು ಪರಿಶೀಲಿಸಲು ಎಚ್‌ಎಸ್‌ಆರ್‌ಪಿ ಸಹಾಯ ಮಾಡಲಿದೆ. ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ಸಾರಿಗೆ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 

4 ಚಕ್ರದ ವಾಹನಗಳಿಗೆ 400 ರೂ.ವಿನಿಂದ 500 ರೂ. ನೀಡಿ ಈ ನಂಬರ್ ಪ್ಲೇಟ್ ಅಳವಡಿಸಬಹುದಾಗಿದೆ.

ಇನ್ನು ದ್ವಿಚಕ್ರ ವಾಹನಗಳಿಗೆ 250 ರೂ.ವಿನಿಂದ 300 ರೂ.ಗೆ ಈ ನಂಬರ್ ಪ್ಲೇಟ್ ಅಳವಡಿಸಬಹುದಾಗಿದೆ.

ನವೆಂಬರ್ 17ರ ಒಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದಿದ್ದಲ್ಲಿ 500ರೂ.ವಿನಿಂದ 1 ಸಾವಿರ ರೂ.ವರೆಗೂ ದಂಡ ವಿಧಿಸುವ ಸಾಧ್ಯತೆ ಇದೆ